भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲೋಹವಕ್ಕರೆ

[ನಾ] [ಲೋಹ+ಪಕ್ಕರೆ] ಲೋಹದ ಪಕ್ಷರಕ್ಷೆ ಅಥವಾ ಕವಚ (ಆಗಳೇಱಿಸಿದ ಬಿಸುಗೆಗಳುಂ ಇಕ್ಕಿದ ಲೋಹವಕ್ಕರೆಗಳುಂ ಉರ್ಚಿದ ಮೊಗವಡಂಗಳುಂ ಕಟ್ಟಿದ ಪೞಯಿಗೆಗಳುಂ: ಪಂಪಭಾ, ೧೦. ೫೧ ವ)

ಲೋಹಾಸನ

[ನಾ] ಐದು, ಏಳು ಅಥವಾ ಒಂಬತ್ತು ಕಾಲುಗಳಿರುವ, ಲೋಹದ ಹಲಗೆಯಿರುವ, ಹತ್ತಿ ಅಥವಾ ರೇಷ್ಮೆಯಿಂದ ತುಂಬಿದ ಮೆತ್ತೆಯುಳ್ಳ ಹಾಗೂ ಹೊದಿಕೆಯುಳ್ಳ ಪೀಠ (ಒಡ್ಡೋಲಗಂಗೊಟ್ಟು ಎಡೆವಱಿಯದೆ ಅವರವರ ಪಡೆದ ಪ್ರತಿಪತ್ತಿಗಳಂ ಅಱಿದಿಕ್ಕಿದ ಲೋಹಾಸನಂಗಳೊಳಂ: ಪಂಪಭಾ, ೯. ೨೮ ವ)

ಲೋಹಿತ

[ಗು] ಕೆಂಪಾದ (ಕ್ರೋಧೋದ್ಗಚ್ಛಚ್ಛೇದ ಸ್ವೇದಜಳಧಾರಾಸಾರ ಭೀಕರ ಲೋಹಿತಕಪೋಳತಳಂ: ಆದಿಪು, ೧೪. ೬೩ ವ)

ಲೋಹಿತಾಂಬುಧಿ

[ನಾ] ರಕ್ತದ ಕಡಲು (ಸಂದ ಚೆನ್ನಪೊಂಗರ ತಲೆ ತಾೞಪಣ್ ಕೆದಱಿದಂತೆ ನಿರಂತರಂ ಆಜಿರಂಗದೊಳ್ ಪರೆದಿರೆ ಲೋಹಿತಾಂಬುಧಿಯೊಳ್ ಆನೆಗಳ ಅಟ್ಟೆಗಳಾಡೆ: ಪಂಪಭಾ, ೮. ೧೦೬)

ಲೋಳೆ

[ನಾ] ಅಂಟುದ್ರವ (ಕೊರೆವೊಡೆ ಬೆಟ್ಟುಗಳ್ ಬಿರಿವುವು ಉಣ್ಮುವ ಲಾಳೆಯ ಲೋಳೆಗಳ್ ಪೊನಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವವಿಯೋಗಮಪ್ಪುದು: ಪಂಪಭಾ, ೪. ೧೦೦)

ಲೌಕಿಕ

[ನಾ] ಲೋಕ ವ್ಯವಹಾರ, ಲೋಕ ರೂಢಿ (ಕೊಟ್ಟೈ ಕಿರ್ಚಂ ಉದಗ್ರ ಶೋಕಶಿಖಿಯಿಂ ಕಣ್ಣೀರ್ಗಳಿಂದೆಯ್ದೆ ನೀರ್ಗೊಟ್ಟೈ ಲೌಕಿಕಮನೇಂ ಇಂ ದಾಂಟಿದೈ: ಪಂಪಭಾ, ೧೩. ೬೧); [ಗು] ಲೋಕಕ್ಕೆ ಸಂಬಂಧಿಸಿದ (ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ: ಪಂಪಭಾ, ೧೪. ೬೦)

Search Dictionaries

Loading Results

Follow Us :   
  Download Bharatavani App
  Bharatavani Windows App