भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲೋಕವಾರ್ತೆ

[ನಾ] ಲೋಕರೂಢಿ (ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚು ನೀರ್ದಳಿದಾಗಳ್: ಪಂಪಭಾ, ೧. ೪೩)

ಲೋಕಾಕಾರ

[ನಾ] [ಜೈನ] ಲೋಕದ ಆಕಾರವು ಸೊಂಟದ ಮೇಲೆ ಎರಡೂ ಕೈಗಳನ್ನಿಟ್ಟು ಕಿಸುಗಾಲಿನಲ್ಲಿ ನಿಂತ ವ್ಯಕ್ತಿಯನ್ನು ಹೋಲುವಂಥದು (ಲೋಕಾಕಾರಮಂ ಅಭಿನಯಿಪಾಕಾರಂ ನೆಗೞೆ ನಿಂದು ವೈಶಾಖಸ್ಥಾನಾಕಾರದೊಳ್ ಮರುದ್ ವೃತನಾ ಕುಳಿಶಾಯುಧನದೊಂದು ಚೆಲ್ವಂ ಪಡದಂ: ಆದಿಪು, ೭. ೧೧೬)

ಲೋಕಾಕಾಶ

[ನಾ] [ಜೈನ] ‘ಷಡ್ದ್ರವ್ಯ’ಗಳನ್ನು ಹೊಂದಿರುವ ಆಕಾಶಪ್ರದೇಶ (ಲೋಕಾಕಾಶಪ್ರದೇಶಪ್ರಮಾಣಪರಿಮಾಣಮುಂ ಅಸ್ಮದಾದ್ಯನುಮೇಯಮುಂ ಸರ್ವಜ್ಞಪ್ರತ್ಯಕ್ಷಗೋಚರಮಪ್ಪುದು ಮುಖ್ಯಕಾಲಂ: ಆದಿಪು, ೬. ೪೮)

ಲೋಕಾಂತಂಬರಂ

[ಗು] ಲೋಕದ ಕೊನೆಯವರೆಗೂ (ಅಂತು ವಸುಷೇಣನಾ ಲೋಕಾಂತಂಬರಮಳವಿ ಬಳೆಯೆ ಬಳೆದೆಸಕಮನೋರಂತೆ ಜನಂಗಳ ಕರ್ಣೋಪಾಂತದೊಳ್ ಒಗೆದೆಸೆಯೆ ಕರ್ಣನೆಂಬನುಮಾದಂ: ಪಂಪಭಾ, ೧. ೯೮)

ಲೋಕಾಂತರ

[ನಾ] ಬೇರೆ ಲೋಕ (ತಲೆಯ ನೆಲೆಗೆ ಲೋಕಾಂತರಕೆ ಎಡೆಯಿಲ್ಲ ಎನಿಸೆ ಪೆರ್ಚಿದಂ ದನುತನಯಂ: ಪಂಪಭಾ, ೧೨. ೧೧)

ಲೋಕಾಂತರಿತ

[ಗು] ಬೇರೆ ಲೋಕಕ್ಕೆ ಹೋದವರು (ಆಯುಷ್ಯಾವಸಾನದೊಳ್ ಓಷಧಿಗಳಂತೆ ಫಳಾಪಾಕಾಂತದೊಳ್ ಕ್ಷುತ ವಿಜೃಂಭಣ ವ್ಯಾಜದಿಂ ಲೋಕಾಂತರಿತರಾಗಿ: ಆದಿಪು, ೫. ೬೯ ವ)

ಲೋಕಾಂತಿಕದೇವ

[ನಾ] [ಜೈನ] ಬ್ರಹ್ಮಸ್ವರ್ಗದ ಅಂತ್ಯಪಟಲದಲ್ಲಿನ ಅಷ್ಟವಿಧ ದೇವತೆಗಳು; ಇವರು ವಿಷಯವಿರಕ್ತರು, ಇವರು ಚತುರ್ದಶಪೂರ್ವಧರರು, ತೀರ್ಥಂಕರರಿಗೆ ವೈರಾಗ್ಯವುಂಟಾದಾಗ ಅವರ ಪ್ರಶಂಸೆಗಾಗಿ ಭೂಲೋಕಕ್ಕೆ ಬರುವರು (ಸಾರಸ್ವತ ಆದಿತ್ಯ ವಹ್ನಿ ಅರುಣ ಗರ್ದತೋಯ ತುಷಿತ ಅವ್ಯಾಬಾಧ ಅರಿಷ್ಟರೆಂಬೆಣ್ಬರುಂ ಲೋಕಾಂತಿಕದೇವರ್ ಬಂದು: ಆದಿಪು, ೯. ೬೦ ವ)

ಲೋಕಾಂತಿಕಾಮರ

[ನಾ] [ಜೈನ] ಲೋಕಾಂತಿಕದೇವ (ತದನಂತರಮೆ ಲೋಕಾಂತಿಕಾಮರವೃಂದಂ ಬಂದು ಬಿಚ್ಚಳಿಸೆ ವಜ್ರಕ್ಕೆ ಬಳಮಿತ್ತಂತೆ: ಆದಿಪು, ೬. ೨೩ ವ)

ಲೋಕಾಯತಿಕ

ನಾಸ್ತಿಕತೆ (ಮಹಾಮತಿ ಸಂಭಿನ್ನಮತಿ ಶತಮತಿಗಳ್ ಲೋಕಾಯತಿಕ ಯೋಗಾಚಾರ ಮಾಧ್ಯಮಿಕ ಮತವಿತಥಾಭಿಧಾಯಿಗಳ್ ಜೀವಾಭಾವಮನೆ ಪಿಡಿಯಚ್ಚುವಿಡಿದು: ಆದಿಪು, ೨. ೭ ವ)

ಲೋಕೈಕಚಕ್ಷು

[ನಾ] ಜಗತ್ತಿನ ಒಂದೇ ಕಣ್ಣಾಗಿರುವ (ಲೋಕೈಕಚಕ್ಷು ನವಕಮಲಾಕರಬಾಂಧವಂ ಅನೇಕ ದಿತಿಸುತ ಸಮರಾನೀಕಭಯಂಕರಂ ಎರಡುಂ ಅನೀಕಂಗಳಡರೆ ನೋಡುವಂತುದಯಿಸಿದಂ: ಪಂಪಭಾ, ೧೦. ೫೧)

ಲೋಗರ್

[ನಾ] ಲೋಕದ ಜನ (ವಸುಧೆಗಸದಳಮಾಯ್ತು ಆ ಮಗನಂದಮೆಂದು ಲೋಗರ್ ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್: ಪಂಪಭಾ, ೧. ೮೭) ಲೋಚನಗೋಚರಂಬರೆಗಂ: [ಗು] ಕಣ್ಣಿಗೆ ಕಾಣುವವರೆಗೂ (ಸೋಲಮನುಂಟುಮಾಡೆ ಹರಿಗಂ ಆಕರ್ಣಾಂತವಿಶ್ರಾಂತ ಲೋಚನಂ ಆ ಲೋಚನಗೋಚರಂಬರೆಗಂ ಒಲ್ದು ಆ ಕನ್ನೆಯಂ ನೋಡಿದಂ: ಪಂಪಭಾ, ೪. ೪೨)

ಲೋಧ್ರ

[ನಾ] ಲೊದ್ದಗೆ ಗಿಡ, ಸಾಂಬ್ರಾಣಿ ಗಿಡ (ಪ್ರಬುದ್ಧ ಲೋಧ್ರಂಗಳಿಂ ರಾಗಮಂ ಬೀಱುವಂತೆ ಮುಗುಳ್ನಗೆ ನಗುವಂತೆ: ಆದಿಪು, ೭. ೩೬ ವ)

ಲೋಮ

[ನಾ] [ಯಾವುದೇ ಬಗೆಯ] ರೋಮ, ಕೂದಲು (ಧಾತುಮಳದೋಷರಹಿತಂ ವೀತನಖ ಶ್ಮಶ್ರು ಕೇಶ ಲೋಮಂ ಶೋಭಾನ್ವೀತಪರಿಪೂರ್ಣಯೌವನಂ: ಆದಿಪು, ೬. ೩೮)

ಲೋಲನಯನ

[ನಾ] ಚಂಚಲವಾದ ಕಣ್ಣು (ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)

ಲೋಲಲಾಂಗೂಲ

[ನಾ] ಅಲ್ಲಾಡುವ ಬಾಲ (ಚಮರೀ ಲೋಲಲಾಂಗೂಲಮಾಲಾವಲಿ ವಿಕ್ಷೇಪಗಳಿಂ ತತ್ ಚಮರರುಹ ಮಹಾಶೋಭೆ ಕೈಗಣ್ಮೆ: ಪಂಪಭಾ, ೪. ೧೪)

ಲೋಲವಿಲೋಚನ

[ನಾ] ಚಂಚಲವಾದ ಕಣ್ಣು (ಪಾಟಲ ಲೋಲವಿಲೋಚನಂ ಮನಂಬುಗೆ ನಳಿತೋಳ ಕೋಳೆಸೆಯೆ: ಪಂಪಭಾ, ೮. ೫೯)

ಲೋಹಕಂಟಕ

[ನಾ] ಲೋಹ[ಕಬ್ಬಿಣ]ದ ಮುಳ್ಳು (ಜಾನುಭಂಜನಿ ಶೂಲಪ್ರಕರಪರಿವೃತಂಗಳುಂ ಕೂಪ ಕೂಟ ಅವಪಾತ ಲೋಹಕಂಟಕ ಸಂಕಟಂಗಳುಂ: ಆದಿಪು, ೧೩. ೫೭ ವ)

ಲೋಹಪಿಂಡ

[ನಾ] ಕಬ್ಬಿಣದ ಗುಂಡು (ಕಾಯ್ದು ಪಜ್ಜಳಿಸುವ ಲೋಹಪಿಂಡಮನೆ ಭೋಂಕೆನೆ ನೀರೊಳಗರ್ದಿದಂತೆವೊಲ್: ಆದಿಪು, ೭. ೯೮)

ಲೋಹಪುತ್ರಿಕಾ

[ನಾ] ಲೋಹದ [ಕಬ್ಬಿಣದ] ಬೊಂಬೆ (ಸದ್ಯಃ ಸಂತಾಪಿತ ಲೋಹಪುತ್ರಿಕಾಪರಿರಂಭಸಂಭೃತ ಪ್ಲೋಷಚಲಜ್ಜಾಂಗಳಗಳತ್ ರುಧಿರ: ಆದಿಪು, ೫. ೮೭ ವ)

ಲೋಹರಸ

[ನಾ] ಕರಗಿಸಿದ ಲೋಹ (ಕುಡಿ ಕಳ್ಳಂ ಎಂದು ಕರಗಿಸಿ ಕುಡಿಯಿಸುವರ್ ಲೋಹರಸಮಂ ಎರ್ದೆ ಕರಗುವಿನಂ: ಆದಿಪು, ೫. ೮೬)

Search Dictionaries

Loading Results

Follow Us :   
  Download Bharatavani App
  Bharatavani Windows App