भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲುಬ್ಧಕ

[ನಾ] ಬೇಡ (ವಿಷಯವಿಷದ್ರುಮಕಂದಳಿಯುಂ ಇಂದ್ರಿಯಲುಬ್ಧಕ ಸ್ವಚ್ಛಂದ ವಿಹಾರಗಹನಭೂಮಿಯುಂ: ಆದಿಪು, ೧೪. ೧೨೨ ವ)

ಲುಳಿತ

[ಗು] ಸಿಂಪಡಿಸಿದ (ಮಲಯಜ ರಸಲುಳಿತ ಕದಳೀದಳವ್ಯಜನ ಮಂದಮಾರುತಾಂದೋಳನದಿಂ ಎಂತಾನುಂ ಮೂರ್ಛೆಯಿಂದೆೞ್ಚಱಿಸಿ: ಆದಿಪು, ೩. ೨೩ ವ); [ಗು] ಕಂಪಿಸಿದ (ನೋಡಿ ನಾಡೆ ಮನಂಗೊಂಡನಿಳೇಶ್ವರಂ ಲುಳಿತ ಮತ್ಸ್ಯಾಪಾಂಗೆಯಂ ಗಂಗೆಯಂ: ಆದಿಪು, ೧೧. ೫೬); [ಗು] ಕೊಂಕಾದ (ಬಳಸಿರ್ದ ಮದಾಳಿಸಂಕುಲಂ ವಿಷಯಾಂಗನಾಲುಳಿತ ಕುಂತಳದಂತೆವೊಲ್ ಒಪ್ಪಿ ತೋಱುಗುಂ: ಪಂಪಭಾ, ೧. ೫೩)

ಲುಳಿತಾಳಕ

[ನಾ] ಅಲುಗಾಡುವ ಮುಂಗುರುಳು (ಪಲವುಮಂದದ ಚೆಂದದ ಚಿನ್ನಪೂಗಳಿಲ್ಲದೆ ಲುಳಿತಾಳಕಂ ಕ್ವಣಿತ ನೂಪುರಮಿಲ್ಲದೆ ಪಾದಪದ್ಮಮೊಪ್ಪಿದುದು: ಆದಿಪು, ೩. ೪೮)

ಲುಳಿತಾಳಕಿ

[ನಾ] ಗುಂಗುರು ಕೂದಲುಳ್ಳವಳು (ತಾಳದ ಲಯಮಂ ನಿಱಿ ನೀಳಾಳಕಮಾರದ ಪೊದಳ್ದ ಮುತ್ತೆಂಬಿವು ಮುಂಮೇಳಿಸಿ ಕೈಕೊಂಡುವು ಲುಳಿತಾಳಕಿ ಕೈಕೊಂಡಳೆಂಬುದೇನಚ್ಚರಿಯೇ: ಆದಿಪು, ೯. ೨೪)

ಲುಳಿತಾಳಕೆ

[ನಾ] ಗುಂಗುರು ಕೂದಲಿನವಳು (ಅದಱ ಪೊದಳ್ದು ನೀಳ್ದ ಲುಳಿತಾಳಕೆ ತನ್ನ ವಕ್ತ್ರಪದ್ಮದಿನೊಸೆದಾಂತೊಡೆ: ಪಂಪಭಾ, ೩. ೭೬)

ಲೂನ

[ಗು] ಮುರಿಯಲ್ಪಟ್ಟ, ಕತ್ತರಿಸಲ್ಪಟ್ಟ (ತದೇಕತ್ವಗ್ರಾಹಕ ಪ್ರತ್ಯಭಿಜ್ಞಾನಮುಂ ಲೂನ ಪುನರ್ಜಾತ ನಖ ಕೇಶಾದಿಗಳೊಳ್ ಪೂರ್ವಾಪರೈಕತ್ವಮಿಲ್ಲದಲ್ಲಿಯುಂ ಕಾಣಲಕ್ಕುಂ: ಆದಿಪು, ೨. ೯ ವ)

ಲೆಂಕ

[ನಾ] ಸೇವಕ (ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರತಿಕಾಮಿಯೆಂಬನುಮಂ ತನ್ನ ತಮ್ಮಂ ದುಶ್ಶಾಸನನುಮಂ ಪೇೞ್ದೊಡೆ: ಪಂಪಭಾ, ೭. ೪ ವ)

ಲೆಕ್ಕ

[ನಾ] ಗಣನೆ (ವೈರಿಭೂಪಬಲದ ಒಡ್ಡು ಅಲ್ಲಾಡೆ ಲೆಕ್ಕಕ್ಕೆ ತಳ್ತಿಱಿದು ಎನ್ನಾಳ್ದನಿಂ ಆನೆ ಮುಂಚಿ ನಿಱಿಪೆಂ ಕೆಯ್ಕೊಂಡು ಕಟ್ಟಾಯಮಂ: ಪಂಪಭಾ, ೯. ೭೧)

ಲೆಕ್ಕಂಗೊಳ್

[ಕ್ರಿ] ಎಣಿಕೆಮಾಡು (ಶಾರ್ದೂಲಾಭೀಲ ವನಂಗಳೊಳ್ ತಿರಿಪಿದೀಯುರ್ಕೊಂದೆ ಲೆಕ್ಕಂಗೊಳಲ್ ಕಾಲಂ ಸಾಲವೆ: ಪಂಪಭಾ, ೯. ೨೨)

ಲೆಕ್ಕಣಿಕೆ

[ನಾ] [ಲೇಖನಿಕಾ] ಬರೆಯುವ ಸಾಧನ (ತರಳಾಪಾಂಗ ವಿಳಾಸಸ್ಪುರಿತಮೆ ಲೆಕ್ಕಣಿಕೆಯಾಗೆ ನಲ್ಲಳ್ ಮುನ್ನಂ ಬರೆದತನುಚರಿತಮೀಗಳ್ ಬರೆದಂತಿರ್ಪುದು ಮನ್ಮನಃಪುಸ್ತಕದೊಳ್: ಆದಿಪು, ೪. ೧೪)

ಲೆಕ್ಕಮುಮಂ ಪೊಕ್ಕಮುಮಂ

[ನಾ] ಇವು ಪ್ರತಿಧ್ವನಿಪದಗಳು, ಲೆಕ್ಕಪೊಕ್ಕಗಳನ್ನು (ಉಳ್ಳ ಓದುಗಳೊಳಗೆ ಎನಿತಱಿವುಳ್ಳರ್ಗಂ ತಿಳಿಪಲರಿಯದೆನಿಪ ಎಡೆಗಳುಮಂ ತೆಳ್ಳಿಗಿರೆ ತಿಳಿಪುಗುಂ ಬೆಸಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ: ಪಂಪಭಾ, ೨. ೩೫)

ಲೆಕ್ಕಮೇ

ಗಣನೀಯನೇ, ಅಲ್ಲ ಎಂಬರ್ಥ (ಬೀಗಿ ಪೊಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ: ಪಂಪಭಾ, ೧. ೧೨)

ಲೇಖ

[ನಾ] ಬರೆಹ, ಪತ್ರ (ಅಪನೀತಮುದ್ರೆಯಂ ಮಾಡಿ ತದಂತಸ್ಸ್ಥಿತಂಗಳಪ್ಪ ರತ್ನಾಭರಣಂಗಳಂ ತೋಱಿ ಕೋಶಾಧ್ಯಕ್ಷಹಸ್ತವಿನ್ಯಸ್ತಂಗಳ್ಮಾಡಿ ದೇವ ಲೇಖಮಿದೆಂದು: ಆದಿಪು, ೧೪. ೪೫ ವ)

ಲೇಶ್ಯಾ

[ನಾ] [ಜೈನ] ಆತ್ಮವನ್ನು ಪಾಪ

ಲೇಶ್ಯಾವಿಶುದ್ಧಿ

[ನಾ] [ಜೈನ] ಲೇಶ್ಯೆಯು ಮಂದವಾಗುತ್ತ ನಡೆದು ಇಲ್ಲವಾಗುವುದು (ಜ್ಞಾನಾದಿಪರಿಣಾಮಂಗಳೊಳ್ ನಿರತಿಶಯ ಲೇಶ್ಯಾವಿಶುದ್ಧಿಯಂ ತಾಳ್ದಿ: ಆದಿಪು, ೧೦. ೧೪ ವ)

ಲೇಸು

[ನಾ] ಶ್ರೇಯಸ್ಕರ (ನಿಮ್ಮಡಿ ಕೊಲೆ ಸಾವುದು ಲೇಸಲ್ತೆ: ಪಂಪಭಾ, ೧೧. ೩೧)

ಲೊಹಿತಾಂಗ

[ನಾ] ಕೆಂಪೇರಿದ ದೇಹವುಳ್ಳವನು (ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜಹರಿಣ ರುಧಿರನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ: ಪಂಪಭಾ, ೪. ೪೯ ವ)

ಲೋಕಪಾಲ

[ನಾ] [ಜೈನ] ಪ್ರತಿಯೊಬ್ಬ ಇಂದ್ರನಿಗೂ ಪೂರ್ವಾದಿ ದಿಕ್ಕುಗಳ ರಕ್ಷಕರಾಗಿರುವ ದಿಕ್ಪಾಲರು (ಸೋಮ ಯಮ ವರುಣ ಕುಬೇರಪ್ರಮುಖ ಲೋಕಪಾಲಾಭಿಯೋಗ್ಯ ದಿಗ್ಗಜೇಂದ್ರ ದೇವವಿಹಾರಪ್ರಾಸಾದಾಭಿರಾಮಮುಂ: ಆದಿಪು, ೧. ೪೯ ವ); [ನಾ] [ಜೈನ] ಒಂದು ದೇವತಾವರ್ಗ (ಸಾಮಾನಿಕ ತ್ರಾಯಸ್ತ್ರಿಂಶತ್ಪಾರಿಷದ ಆತ್ಮರಕ್ಷ ಲೋಕಪಾಳ ಅಭಿಯೋಗ್ಯ ಕಿಲ್ಬಿಷರೊಡನೆ: ಆದಿಪು, ೭. ೪೨ ವ) ‘ತ್ರಾಯಸ್ತ್ರಿಂಶ’ ನರಸಿಂಹಶಾಸ್ತ್ರಿಗಳು ಅನುಮೋದಿಸಿರುವ ಪಾಠ]

ಲೋಕಪೂಜ್ಯಂ

[ನಾ] ಲೌಕಿಕತೆಯ ದೃಷ್ಟಿಯಿಂದ ಹಿರಿದು (ಇವರ್ಗಳಿಂ ಈ ಭಾರತಂ ಲೋಕಪೂಜ್ಯಂ: ಪಂಪಭಾ, ೧೪. ೬೪)

ಲೋಕಪೂರಣಕ್ರಿಯಾ

[ನಾ] [ಜೈನ] ಕೇವಲಿಗಳ ಆತ್ಮವು ಭೂಮಂಡಲದ ವಾಯುತ್ರಯದೊಡನೆ ಬೆರೆಯುವುದು (ವ್ಯಾಪ್ತಸಪ್ತಘನರಜ್ಜುಪ್ರಮಾಣಾಶೇಷ ಜಗತ್ಪ್ರದೇಶ ಲೋಕಪೂರಣ ಕ್ರಿಯಾಪರಿಸಮಾಪ್ತಿಯಂ ಮಾಡಿ: ಆದಿಪು, ೧೬. ೪೯ ವ)

Search Dictionaries

Loading Results

Follow Us :   
  Download Bharatavani App
  Bharatavani Windows App