भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲಾಜೆ

[ನಾ] ಬತ್ತದ ಅರಳು (ಪುರೋಹಿತನ ಪೇೞ್ದೋಜೆಯೊಳ್ ಲಾಜೆಯಂ ಅಗ್ನಿಕುಂಡದೊಳ್ ಸುರಿದು: ಪಂಪಭಾ, ೭೫ ವ)

ಲಾಲಾಜಲ

[ನಾ] ಲಾಲಾಂಬು (ಜಾತ್ಯಶ್ವ ರಥ ಆಶ್ವಸಂಕುಳಖಲೀನ ಉದ್ಭೂತ ಲಾಲಾಜಲಂ ಕದಡೆೞ್ದು: ಪಂಪಭಾ, ೧೦. ೩೧)

ಲಾಲಾಟ

[ನಾ] ಲಲಾಟ, ಹಣೆ (ಭವಲಾಲಾಟ ವಿಲೋಚನಾಗ್ನಿಶಿಖೆಯಿಂ ಬೆಂದಳ್ಕಿ ಮತ್ತಂ ಮನೋಭವಂ ಎೞ್ಚತ್ತೊಡೆ: ಪಂಪಭಾ, ೭. ೨೪)

ಲಾಲಾಂಬು

[ನಾ] ಜೊಲ್ಲಿನ ರಸ (ಕರಿಶೀಕರಕರಮದಜಳ ತುರಂಗಲಾಲಾಂಬುಸೇಕದಿಂದೞಿದುೞಿದಿರ್ದ ರಜಂ ನರೇಂದ್ರಚಾಮರ ಮರುದಭಿಹತಿಯಿಂ ತೆರಳ್ದು ತೂಳ್ದತ್ತಾಗಳ್: ಆದಿಪು, ೧೧. ೩೮)

ಲಾಲಿತ

[ಗು] ಪ್ರೀತಿಯಿಂದ ಕೂಡಿದ (ಗುರುಗಂ ಗುರುವೆಂದೊದವಿದ ಪೆಂಪಿದು ನಿನ್ನೊಂದುದಯದಿನಾಯ್ತು ಅಮರಮೌಳಿ ಲಾಲಿತಚರಣಾ: ಆದಿಪು, ೮. ೯)

ಲಾವಗೆ

[ನಾ] ಲಾವನ ಹಕ್ಕಿ (ಮಂದಪಾಲನೆಂಬ ಮುನಿಗಂ ಒಂದು ಲಾವಗೆಗಂ ಪುಟ್ಟಿದ ನಾಲ್ಕುಂ ಲಾವಗೆಗಳ್ ಅಗ್ನಿಸೂಕ್ತಂಗಳಂ ಓದುತ್ತುಂ ಅದಿರದೆ ಇದಿರಂ ಬರೆ: ಪಂಪಭಾ, ೫. ೧೦೦ ವ)

ಲಾಳೆ

[ನಾ] ಲಾಲಾಂಬು (ಕೊರೆವೊಡೆ ಬೆಟ್ಟುಗಳ್ ಬಿರಿವುವು ಉಣ್ಮುವ ಲಾಳೆಯ ಲೋಳೆಗಳ್ ಪೊನಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವವಿಯೋಗಮಪ್ಪುದು: ಪಂಪಭಾ, ೪. ೧೦೦)

ಲಾೞ

[ನಾ] ಲಾಟದೇಶ (ತಱಿಸಂದು ಲಾೞದೊಳ್ ತಳ್ತಿಱಿದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ ತಿಱುನೀರಿಕ್ಕುವುದೆನಿಸಿದ ತಱಿಸಲವಿನ ಚಲದ ಬಲದ ಕಲಿ ನರಸಿಂಹಂ: ಪಂಪಭಾ, ೧. ೩೩)

ಲಿಪಿವಿಧಾನ

[ನಾ] ಬರೆಯುವ ಕ್ರಮ (ಸೇವಾಧರ್ಮೋಚಿತಮೆನಿಸುವ ಕರ್ಮಮುಮಂ ಅನೇಕ ಲಿಪಿವಿಧಾನಾಧೀನಮಪ್ಪ ಮಷಿಯುಮಂ .. .. ಪಡೆದು: ಆದಿಪು, ೮. ೬೪ ವ)

ಲಿಪಿಸಂಖ್ಯಾನಸಂಗ್ರಹ

[ನಾ] [ಜೈನ] ಒಂದು ಗರ್ಭಾನ್ವಯ ಕ್ರಿಯೆ, ಅಕ್ಷರಾಭ್ಯಾಸ (ಲಿಪಿಸಂಖ್ಯಾನಸಂಗ್ರಹ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಲೀಲಾಕಿಳಕಿಂಚಿತ ಲಲಿತ ವಿಹ್ವದ್ ವಿಳಾಸ ವಿಚ್ಛಿತ್ತಿ ವಿಭ್ರಮಾದಿ ಗುಣಂಗಳ್

[ನಾ] ಸ್ತ್ರೀಯರ ಹತ್ತು ಶೃಂಗಾರಭಾವಗಳು: ಲೀಲಾ, ವಿಲಾಸ, ವಿಚ್ಛಿತ್ತಿ, ವಿಭ್ರಮ, ಕಿಲಕಿಂಚಿತ, ಮೋಟ್ಟಾಯಿತ, ಕುಟ್ಟಮಿತ, ಬಿಬ್ಬೋಕ, ಲಲಿತ, ವಿಹೃತ (ಜಳಕೇಳಿಯೊಳ್ ಅಧಿಪನೆರ್ದೆಗೊಳಿಸಿದುವು ಅಂತಃಪುರೀ ಜನಂಗಳ ಲೀಲಾಕಿಳಕಿಂಚಿತ ಲಲಿತ ವಿಹ್ವದ್ ವಿಳಾಸ ವಿಚ್ಛಿತ್ತಿ ವಿಭ್ರಮಾದಿ ಗುಣಂಗಳ್: ಆದಿಪು, ೧೧. ೧೪೨)

ಲೀಲಾಜಲಾಶಯ

[ನಾ] ಆಟಕ್ಕಾಗಿ ನಿರ್ಮಿಸಿದ ಕೊಳ (ನಾನಾಭವನವಿನ್ಯಾಸ ಉದ್ಯಾನ ಲೀಲಾಜಲಾಶಯಂಗಳುಮಂ .. .. ಮಾಡಿ: ಆದಿಪು, ೮. ೬೩ ವ)

ಲೀಲಾಂದೋಳ

[ನಾ] ಸೊಗಸಿನ ಉಯ್ಯಾಲೆ (ತೋಳ ನೀಳದ ಕೆಂದಳಿರಿಂದಂ ಸಂದಣಿಸಿರ್ದ ಮದಾಳಿಯಿಂದೋಳದಿಂ ಮಳಯಾನಿಳಲೀಲಾಂದೋಳದಿನೊಪ್ಪೆ: ಆದಿಪು, ೩. ೩೦)

ಲೀಲಾಯಿತಂ

ಲೀಲೆಯುಂಟಾಯಿತೋ (ಕುಲಾಲ ಕರನಿರ್ಭರ ಭ್ರಮಿತ ಚಕ್ರ ಲೀಲಾಯಿತಂ: ಪಂಪಭಾ, ೪. ೨೭)

ಲೀಲಾಸರ

[ನಾ] ಲೀಲಾಜಲಾಶಯ (ಇನ್ನದಲ್ತೆ ನೆರೆದಿರ್ಬರಿರ್ದ ಕೃತಕಾಚಳಂ ಚೆಲ್ವನಪ್ಪಿದೇ ಕನಕಪದ್ಮಿನೀನಿಳಯಮೆನ್ನ ಲೀಲಾಸರಂ: ಆದಿಪು, ೪. ೮)

ಲೀಲೆಯೆ

[ಕ್ರಿವಿ] ಲೀಲೆಯಿಂದ (ಮೇಲಾದ ಪಾಂಡುಸುತರಂ ಉಪಾಲಂಭನಗೆಯ್ಯುತಿರ್ಪ ದುರ್ಯೋಧನನಂ ಲೀಲೆಯೆ ನುಂಗುವ ಮೃತ್ಯುವ ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ: ಪಂಪಭಾ, ೩. ೬)

ಲೀಲೋತ್ತಾರಿತ

[ಗು] ಸುಲಭವಾಗಿ ಗೆದ್ದ (ಲೀಲೋತ್ತಾರಿತ ರಿಪುನೃಪಾಲ ಸಾಮಂತ ಸೀಮಂತಿನೀ ಸೀಮಂತರಪ್ಪ ಮಹಾಸಾಮಂತರಿಂದಮವಧಾರಿತ .. .. ವಾರಣಂಗಳಿಂದಂ: ಆದಿಪು, ೧೪. ೪೩ ವ)

ಲುಂಗ

[ನಾ] ಮಾದಲ (ಕಕುಭ ಅಶೋಕ ಕದಂಬ ಲುಂಗ ಲವಲೀಭೂಜ ಆರ್ಜುನ ಅನೋಕಹ ಪ್ರಕರಂ: ಪಂಪಭಾ, ೫. ೮೦);

ಲುಂಠನ

[ನಾ] ಅಲುಗಾಟ (ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜಕಂಠಿಕಾಪರಿಕಲಿತ ಕಂಠಲುಂಠನುಂ ಆಗಿ: ಪಂಪಭಾ, ೧. ೬೮ ವ)

ಲುಂದು

[ಕ್ರಿ] ಸಂಭೋಗಿಸು (ಮೇಲ್ವಾಯ್ದುಮೇವೈಸಿಯುಂ ಪಿರಿದುಂ ಲುಂದುವ ಬೇಟದೊಂದು ಸುಸಿಲುಂ ನೋಯಿಕ್ಕುಂ: ಆದಿಪು, ೧೨. ೨೩); [ನಾ] ಸಂಭೋಗ (ಅಮರ್ದಿನ ಧಾರೆಯಂತೆ ನುಡಿಯಿಂಪು ಅಮರ್ದಂ ತಳಿದಂತೆ ಸೋಂಕಿನಿಂಪು ಅಮರ್ದಿನ ಪೂರದಂತೆ ಪದದಿಂಪು ಅಮರ್ದಂ ಕುಡಿದಂತೆ ಲುಂದಿನಿಂಪು: ಆದಿಪು, ೧೨. ೨೭)

Search Dictionaries

Loading Results

Follow Us :   
  Download Bharatavani App
  Bharatavani Windows App