भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲವಣ

[ನಾ] ಉಪ್ಪು (ಘೃತ ಲವಣ ತೈಲ ಕ್ಷೀರ ದಧಿ ವ್ಯಂಜನಂಗಳೊಳ್ ಸಂಸ್ಕಾರಂ ಮಾಡುವ: ಆದಿಪು, ೬, ೭೭ ವ)

ಲವಣಜಳಧಿ

[ನಾ] ಉಪ್ಪುನೀರಿನ ಸಮುದ್ರ (ಲವಣಜಳಧಿ ಬಳಸಿದಂತೆ ಬಳಸಿದ ಅಗೞ ನೀಳದಿಂದ ಉದಗ್ರ ಕನಕಶಾಳದಿಂ: ಪಂಪಭಾ, ೧. ೫೮)

ಲವಣಾಂಬುರಾಶಿ

[ನಾ] ಉಪ್ಪುನೀರಿನ ಸಮುದ್ರ (ಸುೞಿಯೊಳಗಿರ್ದು ಬೆಟ್ಟು ಪೊಱಪೊಣ್ಮುವಿನಂ ಲವಣಾಂಬುರಾಶಿ ಕುಕ್ಕುೞಗುದಿವಲ್ಲಿ ಕೂೞ್ಗುದಿಯೆ ಮೇಗೆ ಸಿಡಿಲ್ದಗುಳಂತೆ ಕೂಡೆ: ಪಂಪಭಾ, ೧೧. ೧೫೩)

ಲವಣೋದಧಿ

[ನಾ] ಉಪ್ಪುನೀರಿನ ಸಮುದ್ರ (ದ್ವಾದಶರಾಜಕಮೆಂಬುದಂ ಓದುಗಳೊಳ್ ಕೇಳಲಾದುದಲ್ಲದೆ ಕಾಣಲ್ಕಾದುದೆ ಲವಣೋದಧಿವೃತೆ ಮೇದಿನಿಯೊಳ್ ದೇವ ನಿನ್ನ ಪೆಸರೆಸೆವೆಡೆಯೊಳ್: ಆದಿಪು, ೧೪. ೧೪)

ಲವಹಾರಿ

[ನಾ] ಹನಿಗಳನ್ನು ಹೋಗಲಾಡಿಸುವ (ಅಂತು ಕಾಳಿಂದೀಜಲಶಿಶಿರಶೀಕರ ವಾರಿಚಾರಿಯುಂ ಮೃಗಯಾಪರಿಭ್ರಮಶ್ರಮ ಉತ್ಥಿತ ಸ್ವೇದಜಲಲವಹಾರಿಯುಂ ಆಗಿ ಬಂದ ಮಂದಾನಿಲಕ್ಕೆ: ಪಂಪಭಾ, ೫. ೫೩ ವ)

ಲವಳೀ

[ನಾ] ಅರನೆಲ್ಲಿ ಮರ (ತೀರಸ್ಥ ಲವಂಗ ಚೂತ ಲವಳೀ ಪುಷ್ಪಾಸವಾಸ್ವಾದಿತ ಉದಯುತೋನ್ಮಾದೆಯ: ಆದಿಪು, ೧. ೫೪)

ಲವೋದ್ಗಮ

[ನಾ] ಸಿಡಿದ ಹನಿ, ತುಂತುರುಹನಿ (ಸುಖಾಂಬು ಲವೋದ್ಗಮದೊಳ್ ವಿಚಾರಿಸಲ್ ಗಣಿದಮಿದೊಂದುಮಿಲ್ಲ: ಆದಿಪು, ೩. ೭೧)

ಲಸತ್

[ಗು] ಹೊಳೆಯುವ (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಂಗಸಂಗತ ಲಸತ್ ಭಸಿತಂ: ಪಂಪಭಾ, ೧. ೨)

ಲಹರಿಕಾ

[ನಾ] ಅಲೆ, ತರಂಗ (ಜಯದ್ಘೋಷಣಂ ಮಂದಮಂದಂ ತೀಡಿತ್ತು ಆಲೋಲ ಗಂಗಾಲಲಿತಲಹರಿಕಾ ಸಾರಸಾರಂ ಸಮೀರಂ: ಆದಿಪು, ೭. ೨೫)

ಲಹರಿಕೆ

[ನಾ] ಅಲೆ (ಅನವರತಂ ಪುದಿದುವೊ ನಿಮಿರ್ದನೇಕ ಚಮರೀಜದುಗ್ಧಜಳಲಹರಿಕೆಗಳ್: ಆದಿಪು, ೯. ೮)

ಲಳಿತ

[ನಾ] ಲಾಸ್ಯ, ಒಂದು ಬಗೆಯ ನೃತ್ಯ (ಅಳಿನಿನದದ ಮದಕೋಲಿಳ ಕಳನಿನದದ ಜತಿಯೊಳಬೀನಯಮಂ ನೆಗೞ್ವಿನೆಗಂ ಲಳಿತಮನೇಡಾಡಿಸಿದನೊ ಮಳಯಾನಿಳ ನರ್ತಕಂ ಲತಾನರ್ತಕಿಯಾ: ಆದಿಪು, ೧೧. ೯೩); [ಗು] ಕೋಮಲ (ಮುಕುಳೀಕೃತಂ ಲಳಿತಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂದಳಿಪಂ ಅಪಸನ್ಮುಗ್ಧ ಸ್ನಿಗ್ಧಂ ವಿಳೋಕನಮೋಪಳಾ: ಪಂಪಭಾ, ೪. ೭೭)

ಲಾಕ್ಷಾ

[ನಾ] ಅರಗು (ಉತ್ತಪ್ತಾವದಾತಲೋಹಪುತ್ರಿಕಾನದ್ಧ ಲಾಕ್ಷಾ ಹಿಂಗುಲಿಕ ಪಾಟಲಫಲಂ ಅರ್ಧಕರವಾಳಚಾಳನ ಪ್ರಕಟಿತಭಟಬಿಭೀಷಿಕಾಡಂಬರಂ: ಆದಿಪು, ೧೩. ೪೫ ವ)

ಲಾಕ್ಷಾಗೃಹ

[ನಾ] ಅರಗಿನ ಮನೆ (ಆ ಲಾಕ್ಷಾಗೃಹದಾಹಮೊಂದೆ ವಿಷಸಂಯುಕ್ತಾನ್ನಂ ಅಂತೊಂದೆ ಪಾಂಚಾಲೀನಿಗ್ರಹಂ ಒಂದೆ ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ: ಪಂಪಭಾ, ೯. ೨೨)

ಲಾಕ್ಷಾಗೇಹ

[ನಾ] ಅರಗಿನ ಮನೆ (ನರಕನಗರಲಗ್ನ ಆಕಸ್ಮಿಕಾಗ್ನಿ ಸ್ಫುಲಿಂಗಸ್ಫುರತ್ ಅವಿರಳ ಲಾಕ್ಷಾಗೇಹಪೂರೈಕಭಾವ ತ್ವರಿತವಿಚಳತ್ ಅಸ್ಥಿಗ್ರಂಥಿಸಂಸ್ಥಾನಬಂಧರ್: ಆದಿಪು, ೫. ೮೯)

ಲಾಕ್ಷಾರಸ

[ನಾ] ಅರಗಿನ ರಸ (ಚತುರಂತಕ್ಷಿತಿ ಗರ್ಭಸ್ಥಿತನದು ಗಡಿಮೆಂದು ಮುದ್ರಿಪಂತಾಯ್ತು ಯಶಸ್ವತಿಯ ಪದನ್ಯಾಸಂ ವಿಳಸಿತ ಲಾಕ್ಷಾರಸಪೂರ್ವ ಮಣಿಕುಟ್ಟಿಮದೊಳ್: ಆದಿಪು, ೮. ೩೨)

ಲಾಂಗಲ

[ನಾ] ನೇಗಿಲು (ಇರೆ ವಾಮಹಸ್ತದೊಳ್ ಬಿಲ್ ತಿರುವಂ ಗೊಲೆಗೊತ್ತಿ ಚಕ್ರಮಂ ಚೆಲ್ಲಿಸುವೆಂ ಬರಲೀಯೆಂದು ಲಾಂಗಲ ಶರಂಗಳಂ ಪಿಡಿದು ಪವನನಂದನನಿರ್ದಂ: ಪಂಪರಾ, ೧೪. ೧೮೦)

ಲಾಂಗೂಲ

[ನಾ] ಬಾಲ (ಚಮರೀ ಲೋಲ ಲಾಂಗೂಲ ಮಾಲಾವಲಿ ವಿಕ್ಷೇಪಂಗಳಿಂ ತತ್ ಚಮರರುಹ ಮಹಾಶೋಭೆ ಕೈಗಣ್ಮೆ: ಪಂಪಭಾ, ೪. ೧೪)

ಲಾಂಛನ

[ನಾ] ಗುರುತು (ಅನ್ನೆಗಮಿತ್ತ ಮೇರುಗಿರಿಯೆ ತನಗೆ ನಾಭಿಯಾಗೆ ಸೊಗಯಿಸುವ ಜಂಬೂಮಹೀರುಹ ಲಾಂಛನ ದ್ವೀಪಾಂತರ್ಗತ ಭರತಕ್ಷೇತ್ರ: ಆದಿಪು, ೬. ೪೮ ವ)

ಲಾಂಛಿತ

[ಗು] ಗುರುತಿರುವ (ಕೊಳದ ತಡಿಯೊಳ್ ಹಳಿಕುಳಿಶಶಂಖಚಕ್ರ ಲಾಂಛಿತಮಪ್ಪ ಅಡಿವಜ್ಜೆಯಂ ಕಂಡು: ಪಂಪಭಾ, ೧೩. ೭೬ ವ)

ಲಾಜಾಂಜಲಿ

[ನಾ] [ಲಾಜ+ಅಂಜಲಿ] ಬತ್ತದ ಅರಳು ತುಂಬಿದ ಬೊಗಸೆ (ಶೀಕರನಿಕರಂಗಳಂತೆ ಸೊಗಯಿಸುವ ಧವಳಾಕ್ಷತ ಸಿತಕುಸುಮ ಮಂಗಳ ಲಾಜಾಂಜಲಿಗಳುಮನುರಾಗದಿಂ: ಆದಿಪು, ೧೧. ೨೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App