भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲಯಾಗ್ನಿ

[ನಾ] ಪ್ರಳಯಕಾಲದ ಬೆಂಕಿ (ಮೊಕ್ಕಳಂ ಕವಿದುವು ಉಗ್ರಲಯಾಗ್ನಿಗಳಂತೆ ಬೆಟ್ಟುಗಳ್ ಕವಿದುವು ಎಂಬನಿತ್ತು ಭಯಮಾಯ್ತು ಗುಣಾರ್ಣವನ ಅಸ್ತ್ರಕೌಶಲಂ: ಪಂಪಭಾ, ೨. ೭೭)

ಲಯಾಂತಕ

[ಗು] ಪ್ರಳಯವನ್ನುಂಟುಮಾಡುವ (ಪೊದಳ್ದ ಲಯಾಂತಕ ತ್ರಿಶೂಲೋಪಮ ಭೀಷಣಭ್ರುಕುಟಿ ಮುನ್ನಮೆ ರೌದ್ರ ಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ: ಪಂಪಭಾ, ೭. ೬)

ಲಯಾಂತೋಗ್ರಾಗ್ನಿ

[ನಾ] [ಲಯಾಂತ+ಉಗ್ರಾಗ್ನಿ] ಪ್ರಳಯಕಾಲದ ಭಯಂಕರವಾದ ಬೆಂಕಿ (ಆತನಂ ಕೊಳ್ಳಿಯೊಳಿಟ್ಟೊಡೆ ಅಂತದು ಲಯಾಂತೋಗ್ರಾಗ್ನಿಯಂತೆ ಅೞ್ವೆ ಬಂದು: ಪಂಪಭಾ, ೩. ೩೪)

ಲಯಾಂಭೋದ

[ನಾ] ಪ್ರಳಯಕಾಲದ ಮೋಡ (ಆದಿತ್ಯಂ ಮಸುಳ್ವನ್ನೆಗಂ ಧ್ವಜಘಟಾಟೋಪಂಗಳಿಂದಂ ಲಯಾಂಭೋದಂಗಳ್ ಕವಿವಂತೆವೋಲ್ ಕವಿವುದುಂ: ಪಂಪಭಾ, ೧೦. ೯೩)

ಲಲಾಟ

[ನಾ] ಹಣೆ (ಮೂಱುಂ ಲೋಕದ ಮೂಱುಪಟ್ಟಮನಾಳಲ್ಕೆ ತಕ್ಕ ಸಹಜಮನೋಜನ ಲಲಾಟಂ ಪಟ್ಟಂಗಟ್ಟಿದ ನೊಸಲ್ಗೆ: ಪಂಪಭಾ, ೨. ೩೯ ವ)

ಲಲಾಟಂತಪ ತಪನಾಂಶು

[ನಾ] ಹಣೆ ಸುಡುತ್ತಿರುವ ಸೂರ್ಯ (ನೃಪಂ ನಡೆಯೆ ಲಲಾಟಂತಪ ತಪನಾಂಶುವಿಂ ಸರೋವರಜಲಮೋರಂತಿರೆ ದಂಡರತ್ನಂ ಕಾಯ್ಗೊಂಡದ ನೀರಂತಿರೆ ಕುದಿದತ್ತು: ಆದಿಪು, ೧೧. ೪೮)

ಲಲಾಟತ್ರಿಪತಾಕೆ

[ನಾ] ಹಣೆಯ ಮೂರು ಗೆರೆಗಳು (ವಿಪಕ್ಷಕ್ಷತ್ರಿಯ ಪರಾಕ್ರಮಾಕೀರ್ಣನೋದೀರ್ಣ ಕ್ರೋಧದೊಳ್ ಅಳೀಕಭ್ರುಕುಟಿಯುಂ ಅನರ್ಥಕಲಲಾಟತ್ರಿಪತಾಕೆಯುಂ: ಆದಿಪು, ೧೪. ೮೧ ವ)

ಲಲಾಟದ ಕಣ್

[ನಾ] ಶಿಶುಪಾಲ ಹುಟ್ಟಿದಾಗ ಇದ್ದ ಹಣೆಯ ಮೇಲಿನ ಕಣ್ಣು (ನಿನ್ನಯ ತಾಯ್ ಸಾತ್ವತಿಯುಂ ನಿನ್ನಂ ತಂದೆನ್ನ ತೊಡೆಯ ಮೇಲಿೞಿಪುವುದುಂ ನಿನ್ನ ಲಲಾಟದ ಕಣ್ಣದು ಮುನ್ನಮೆ ಕಿಡೆ: ಪಂಪಭಾ, ೬. ೬೦)

ಲಲಾಟನೇತ್ರ

[ನಾ] ಹಣೆಯ ಕಣ್ಣು (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಂಗಸಂಗತ ಲಸತ್ ಭಸಿತಂ ಪ್ರಭುಶಕ್ತಿ ಶಕ್ತಿ: ಪಂಪಭಾ, ೧. ೨)

ಲಲಾಟನೇತ್ರಾನಳ

[ನಾ] [ಲಲಾಟನೇತ್ರ+ಅನಳ] ಹಣೆಗಣ್ಣಿನ ಬೆಂಕಿ (ಪ್ರಳಯದುರಿ ಕಾಳಕೂಟದ ಗುಳಿಗೆ ಪುರಾಂತಕ ಲಲಾಟನೇತ್ರಾನಳನೊಂದು ಅಳವಿಗಂ ಅಗ್ಗಳಂ ಅವರ್ಗಳ ಮುಳಿಸುಗಳುಂ: ಪಂಪಭಾ, ೭. ೬೬)

ಲಲಾಟಪಟ್ಟ

[ನಾ] ಹಣೆ (ಮಹೀತಳಾಶ್ಲಿಷ್ಟಜಾನುಲಲಾಟಪಟ್ಟರ್ ಪ್ರಣಾಮಾರ್ಪಣಪುರಸ್ಸರಂ ಶಿರೋವೇಷ್ಟನ ಪ್ರಲಂಬ ಚೇಳಾಂಚಳ ಪಿಹಿತವದನರಾಗಿ: ಆದಿಪು, ೧೦. ೪೮ ವ)

ಲಲಾಟಸ್ಪೃಷ್ಟಭೂತಳ

[ನಾ] ನೆಲಕ್ಕೆ ಹಣೆಯನ್ನು ತಾಕಿಸಿದವನು (ದೂರಾವನತಮಣಿಮಕುಟನಾಗಿ ಕಂಡು ವಸ್ತುವಾಹನ ಪುರಸ್ಸರಂ ಮೇಚ್ಛರಾಜಂ ಲಲಾಟಸ್ಪೃಷ್ಟಭೂತಳರಂ ಮಾಡಿ ಕಾಣಿಸಿ: ಆದಿಪು, ೧೩. ೪೦ ವ)

ಲಲಾಮ

[ನಾ] ಹಣೆಯ ಆಭರಣ, ಶ್ರೇಷ್ಠ (ಭುವನತ್ರಯ ಸಂಗೀತ ಕೀರ್ತಿ ಸೋಮಂ ಸಕಲ ಕ್ಷತ್ರಕುಲ ಪೂಜ್ಯನಮಳ ಚರಿತ್ರಂ ಪ್ರೋದ್ದಾಮ ಸೋಮವಂಶ ಲಲಾಮಂ: ಪಂಪಭಾ, ೧. ೬೧)

ಲಲಿತ

[ನಾ] ಸುಂದರವಾದ, ಕೋಮಲವಾದ (ಅತಿಸುಭಗೆಗೆ ಸಂದ ಸರಸ್ವತಿಗೀತನ ಲಲಿತ ವಾಗ್ವಿಳಾಸಮೆ ದಲ್ ಅಲಂಕೃತಿಯವೊಲೆಸೆದಪುದು: ಆದಿಪು, ೧. ೨೮)

ಲಲಿತಪದ

[ನಾ] ಸುಂದರ ಶಬ್ದ (ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾಱರ ಕೇಡು: ಪಂಪಭಾ, ೧. ೧೨)

ಲಲಿತಾಂಗತೆ

[ನಾ] ಚೆಲುವಾದ ದೇಹದಿಂದ ಕೂಡಿರುವುದು (ದೇವ ರಾಗದೊಳಿರು ನೀನುಂ ಇಲ್ಲಿ ಲಲಿತಾಂಗತೆಯಿಂ ಲಲಿತಾಂಗದೇವನೈ: ಆದಿಪು, ೨. ೬೮)

ಲಲಿತಾಂಗಿ

[ನಾ] ಕೋಮಲ ದೇಹದವಳು, ಸುಂದರಿ (ಸಾರಂ ಅನಂಗಜಂಗಮಲತಾ ಲಲಿತಾಂಗಿಯರಿಂದಮಲ್ತೆ ಸಂಸಾರಂ: ಪಂಪಭಾ, ೧೧೪)

ಲಲ್ಲೆ

[ನಾ] ಓಲೈಕೆ, ಪೂಸಿ (ನುಡಿದೊಡೆ ಲಲ್ಲೆಯೆಂಗುಂ ಎರ್ದೆವೇೞ್ದೊಡೆ ಕೈತವಮೆಂಗುಂ ಆಸೆಯಿಂ ಪಿಡಿದೊಡೆ ಸೇದೆಯೆಂಗುಂ: ಆದಿಪು, ೧೨. ೩೨); [ನಾ] ಪ್ರೇಮ, ಸರಸ (ಎನಿತಾನುಂ ತೆಱದೊಳ್ ಅಳಿಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳಂ ನುಡಿದುಂ ಕಾಲ್ವಿಡಿದುಂ: ಪಂಪಭಾ, ೭. ೯೪ ವ)

ಲಲ್ಲೈಸು

[ಕ್ರಿ] ಪ್ರೀತಿಯ ಮಾತಾಡು (ಕುಡದಿರ್ ಪುರಿಗಣೆಯಂ ಎನಿತು ಲಲ್ಲೈಸಿದೊಡಂ: ಪಂಪಭಾ, ೯. ೭೮)

ಲವ

[ನಾ] ತುಂತುರು, ಹನಿ (ನೇಸಱಿಂದೊಳಗೆ ಆಂ ದಿನಕರಸುತನಂ ಇಕ್ಕಿ ಬಂದಲ್ಲದೆ ಕಾಣೆಂ ದಲ್ ಭವತ್ ಪದಾಬ್ಜಮಂ ಎಂದು ಎೞ್ದಂ ಉದಶ್ರುಜಳ ಲವ ಆರ್ದ್ರ ಕಪೋಳಂ: ಪಂಪಭಾ, ೧೨. ೧೩೪)

Search Dictionaries

Loading Results

Follow Us :   
  Download Bharatavani App
  Bharatavani Windows App