भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲತಾಲಲಿತೆ

[ನಾ] ಬಳ್ಳಿಯಂತೆ ಕೋಮಲೆ (ಆಗಳೆ ಮಗನಂ ಪೆತ್ತವೊಲಾಗಿ ಲತಾಲಲಿತೆ ನೊಸಲ ಕಣ್ಬೆತ್ತವೊಲ್: ಪಂಪಭಾ, ೯. ೭೫)

ಲತಿಕಾಂಗ

[ನಾ] ಬಳ್ಳಿಮೈ (ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟು ಅಲರ್ಗಣ್ಣ ನೋಟಂ ಉಣ್ಮಿದ ಬೆಮರ್ ಓಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂದಿದ ಲತಿಕಾಂಗಂ: ಪಂಪಭಾ, ೪. ೬೦)

ಲತೆ

[ನಾ] ಬಳ್ಳಿ (ಲತೆಗಳ್ ಜಂಗಮರೂಪದಿಂದೆ ನೆರದುವೋ ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಲಂಪಟ

[ನಾ] ಆಸಕ್ತ, ಕಾಮುಕ (ವಿಷಯಸುಖಾಸ್ವಾದನದೊಳ್ ಲಂಪಟರಿದೇಕೆಯೋ ನರಪಶುಗಳ್: ಆದಿಪು, ೧೪. ೧೨೫);

ಲಪನ

[ನಾ] ಮುಖಸೌಂದರ್ಯ (ನಗರಲಲನೆಯ ಲಪನಕ್ಕೆ ಕೇಳೀಲೀಲಾಲಲಾಮಲಕ್ಷ್ಮಿಯಂ ತಾಳ್ದಿ: ಆದಿಪು, ೬. ೧೦೬ ವ)

ಲಂಪಳ

[ನಾ] ವಿಷಯಾಸಕ್ತ (ಓವೋ ಲಂಪಳರಪ್ಪೆಮ್ಮಂದಿಗರಂ ಬಗೆವಂದದೆ ಕೊಂದಿಕ್ಕವೆ ಸಕಳವಿಯವಿಷಮವಿಷಂಗಳ್: ಆದಿಪು, ೪. ೭೩)

ಲಂಪಳಿಕೆ

[ನಾ] ಲಂಪಟತೆ (ಬಿಸುಡಂ ಮುನ್ನಿನ ತನ್ನ ಲಂಪಳಿಕೆಯಂ ಮತ್ತಂ ಜರಾಜರ್ಜರಂ: ಆದಿಪು, ೨. ೪೫)

ಲಂಬ

[ಕ್ರಿ] ಜೋಲುಬಿದ್ದಿರುವ (ಉತ್ತುಂಗ ಪೀನನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ: ಪಂಪಭಾ, ೩. ೫೪)

ಲಂಬಣ

[ನಾ] ಹಾರ (ಸರಿಗೆಗಿವು ಲಂಬಣಕ್ಕಿವು ಬರಗಲೆಗಿವು ಮುಗುಳ್ಗಳೆಮ್ಮ ಮೇಖಳೆಗಿವು ನೂಪುರರಚನೆಗಿಂತೆವೆಂದು ಅದರದಿಂದಂ ಕೊಯ್ದರಾಯ್ದು ದಿವಿಜಾಂಗನೆಯರ್: ಆದಿಪು, ೭. ೬೯)

ಲಂಬಣಿಗೆ

[ನಾ] ಲಂಬಣ (ಮಣಿಮಕುಟಂ ಶಿಖರಂ ಲಂಬಣಿಗೆಯ ಪೊಸಮುತ್ತು ನಿರ್ಝರಂ ಮಣಿಕಟಕಂ ಮಣಿಕಟಕಮಾಗೆ ತದ್ಗಿರಿಗೆಣೆಯಾದಂ ತನ್ನ ಪೆಸರೊಳಂ ವಿಜಯಾರ್ಧಂ: ಆದಿಪು, ೧೩. ೧೩)

ಲಂಬಮಾನ

[ಗು] ಜೋತುಬಿದ್ದಿರುವ (ಅದು ಅಭ್ಯುದಯಸುಖ ನಿಳಯಂ ಅದು ಮೋಕ್ಷದ ನೆರೆಮನೆ ಲಂಬಮಾನ ಮುಕ್ತಾದಾಮಂ: ಆದಿಪು, ೬. ೩೬)

ಲಂಬಸ್ತನ

[ನಾ] ದೊಡ್ಡಮೊಲೆ (ನಾಭಿವಿಲಂಬಮಾನ ಲಂಬಸ್ತನವಿಸ್ರಸ್ತ ಅಂತರೀಯ ಉತ್ತರೀಯ ವೃದ್ಧಧಾತ್ರೀನರ್ತನ ನಿರೀಕ್ಷಣ ಜನತಾಜನಿತಹಾಸನಿವಾಸಮುಂ: ಆದಿಪು, ೮. ೩೫ ವ)

ಲಂಬಾಳಕ

[ನಾ] ನೀಳ ಕೂದಲು (ಬಂದು ಕಾಲ್ಗೆಱಗೆ ಲೀಲಾಲಂಬಿ ಲಂಬಾಳಕಾಳಿ ನಿಲುಂಬಿರ್ದುವು ಚಕ್ರವರ್ತಿಯ ಪದಾಂಭೋಜಂಗಳೊಳ್ ಕನ್ನೆಯಾ: ಆದಿಪು, ೩. ೪೭)

ಲಂಬೂಷ

[ನಾ] ಏಳು ಎಳೆಗಳ ಹಾರ (ಮುಕ್ತಾಫಳಲಂಬೂಷಂಗಳಂ ಬಿತ್ತರಿಸನವರತಂ ರಂಗದೊಳ್ .. … ರಯ್ಯಮಾಯ್ತತ್ತಮಿತ್ತಂ: ಆದಿಪು, ೧೦. ೪೭)

ಲಬ್ಧ

[ನಾ] ಸಿಕ್ಕಿದ, ಪಡೆದ (ಸ್ವಪಕ್ಷ ಸ್ಥಾಪನಂಗೆಯ್ದು ಸನ್ಮಾರ್ಗ ಪ್ರಕಾಶದಿಂ ಮಾರ್ಗಪ್ರಭಾವನೆಯಂ ಮಾಡಿ ಸಭಾಸದರಿಂ ಲಬ್ಧಪ್ರಶಂಸನಾಗಿ: ಆದಿಪು, ೨. ೨೨ ವ)

ಲಬ್ಧಿತ್ರಯ

[ನಾ] [ಜೈನ] ಕಾಯ, ಕರಣ, ಉಪಶಮ ಎಂಬ ಮೂರು ಲಬ್ಧಿಗಳು (ಅಂತು ತನಗೆ ಕಾಲಲಬ್ಧಿಯುಂ ಕರಣಲಬ್ಧಿಯುಂ ಉಪಶಮಲಬ್ಧಿಯುಂ ಎಂಬ ಲಬ್ಧಿತ್ರಯಂ ದೊರೆಕೊಳೆ: ಆದಿಪು, ೩. ೧ ವ)

ಲಬ್ಧೋಪದೇಶ

[ನಾ] ಉಪದೇಶ ಪಡೆದವನು (ನೀಂ ಪೋಗಿ ಕಾಲ್ಗೆಱಗಲೊಡಂ ಕೇವಲಜ್ಞಾನಮಕ್ಕುಂ ಎಂದು ಬೆಸಸಿದೊಡೆ ಲಬ್ಧೋಪದೇಶನಾಗಿ .. .. ಬಂದೆಱಗಿ: ಆದಿಪು, ೧೪. ೧೪೩ ವ)

ಲಯ

[ನಾ] ತಾಳಮಾನ (ಪದವಿನ್ಯಾಸದ ತುಱುಗಲ್ ಪೊದಳೆ ಲಯಂಬೆರಸು ರಂಗಮಂ ಬಳಸಿದನಾ ತ್ರಿದಶಾಧಿನಾಥಂ: ಆದಿಪು, ೭. ೧೧೯); [ನಾ] ಕೇಡು (ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನಱಿದು ಮೇಗಿಲ್ಲದ ಗೊಡ್ಡಾಟಮಾಡಲ್: ಪಂಪಭಾ, ೭. ೪ ವ); [ನಾ] ನಾಶ (ಆದಿತ್ಯಂ ಮಸುಳ್ವನ್ನೆಗಂ ಧ್ವಜಘಟಾಟೋಪಂಗಳಿಂದಂ ಲಯ ಅಂಭೋದಂಗಳ್ ಕವಿವಂತೆವೋಲ್ ಕವಿವುದುಂ: ಪಂಪಭಾ, ೧೦. ೯೩); [ನಾ] ಸಾವು (ಹರಿ ನಿಜಯೋಗದಿಂದಱಿದು ತನ್ನಳಿಯಂ ಲಯಮಾದುದಂ: ಪಂಪಭಾ, ೧೧. ೧೧೦)

ಲಯಕ್ರೀಡೆ

[ನಾ] ವಿನಾಶದ ಆಟ (ಅನಲಂ ಪರಸುತ್ತುಂ ಆ ಲಯಕ್ರೀಡೆಯೊಳೀ ಚರಾಚರಮುಮಂ ಸುಡುವಂದಿನ ಮೆಯ್ಗಂ ಅಗ್ಗಳಂ ಮಾಡಿ: ಪಂಪಭಾ, ೫. ೮೫)

ಲಯಘನಘಟೆ

[ನಾ] ಪ್ರಳಯಕಾಲದ ಮೋಡಸಮೂಹ (ಘಟೆಯ ದೞದ ಉಲಿವು ಲಯಘನಘಟೆಗಳ ಮೊೞಗೆನಿಸೆ ಪೊಟ್ಟಗೆ ಒಡೆದತ್ತು ರಟತ್ ಪಟು ಪಟಹ ಶಂಖ ಭೇರಿಯ ಚಟುಳಿತದಿಂದ ಅತಳಪಟಂ ಅಂಬರಪಟಳಂ: ಪಂಪಭಾ, ೧೦. ೬೭)

Search Dictionaries

Loading Results

Follow Us :   
  Download Bharatavani App
  Bharatavani Windows App