भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893738Next >

ನಃ

ನಮ್ಮನ್ನು (ಸ ಸರ್ವಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ: ೪. ೨೭)

ನ ದೇವಚರಿತಂ ಚರೇತ್

ದೇವರ ನಡೆಯಂತೆ ನಡೆದುಕೊಳ್ಳಲಾಗದು (ನ ದೇವಚರಿತಂ ಚರೇತ್ ಎನಿಸಿದೈ ತ್ರಿಲೋಕೇಶ್ವರಾ: ಆದಿಪು, ೧೩. ೮೪)

ನಕುಲ

[ನಾ] ಪಂಚಪಾಂಡವರಲ್ಲೊಬ್ಬ (ನಕುಲಂ ಕುಂತಶಸ್ತ್ರದೊಳತಿಪ್ರವೀಣನುಮಾಗಿ: ಪಂಪಭಾ, ೨. ೩೬ ವ)

ನಕುಳ

[ನಾ] ನಕುಲ, ಮುಂಗುಸಿ (ಶಾರ್ದೂಲ ವರಾಹ ಗೋಲಾಂಗೂಲ ನಕುಳಂಗಳಂ ನೋಡುತ್ತಮವರ್ಕೆ ಭಕ್ಷ್ಯಾಪೂಪಗಳಂ ತಿರಿಸಿ ನೀಡುತ್ತಮಿರ್ದ: ಆದಿಪು, ೫. ೨ ವ)

ನಕ್ಕು

[ಕ್ರಿ] ನೆಕ್ಕು, ನಾಲಗೆಯಿಂದ ರುಚಿನೋಡು (ಎನಿತಾನುಂ ಅಂಬುನಿಧಿಗಳಂ ಅನೇಕ ನಾಕಂಗಳಲ್ಲಿ ಕುಡಿದುಂ ಪೋಯ್ತಿಲ್ಲೆನಗೆ ನರಭೋಗಮೆಂಬೀ ಪನಿಪುಲ್ಲಂ ನಕ್ಕೆ ತೃಷ್ಣೆ ಪೇೞ್ ಪೋದಪುದೇ: ಆದಿಪು, ೯. ೫೭)

ನಕ್ರ

[ನಾ] ಮೊಸಳೆ (ಕರಾಳನಕ್ರಚರ್ವಿತ ನಿಕೀರ್ಣನಿರಯಜನಿಕುರುಂಬ ಶಲ್ಯಶಕಲಪರಿಪೂರಿತ ಧವಳಪ್ಲವದುರ್ನಿರೀಕ್ಷಣವಿಷಮೆಯುಂ: ಆದಿಪು, ೫. ೮೭ ವ)

ನಕ್ಷತ್ರ

[ನಾ] ಹುಟ್ಟಿದ ನಕ್ಷತ್ರ (ಶುಭತಿಥಿ ಶುಭನಕ್ಷತ್ರಂ ಶುಭವಾರಂ ಶುಭಮುಹೂರ್ತಮೆನೆ ಗಣಕಂ ಇಳಾಪ್ರಭುವೊಗೆದಂ ಉದಿತಕಾಯಪ್ರಭೆಯೊಗೆದಿರೆ ದಳಿತಶತ್ರುಗೋತ್ರಂ ಪುತ್ರಂ: ಪಂಪಭಾ, ೧. ೧೨೭)

ನಕ್ಷತ್ರಮಾಳಾ

[ನಾ] ಇಪ್ಪತ್ತೇಳು ಎಳೆಗಳ ಮುತ್ತಿನ ಕಂಠೀಹಾರ (ಅರ್ಧಹಾರ ರಶ್ಮಿಕಳಾಪ ನಕ್ಷತ್ರಮಾಳಾ ಅರ್ಧಗುಚ್ಛ ಮಾಣವಕ ಅರ್ಧಮಾಣವಕಗಲೆಂಬ ಪನ್ನೊಂದು ನಾನಾರತ್ನದ ಸುವರ್ಣಪದಕವಿರಚನಾದಿ ಭೇದದಿಂ: ಆದಿಪು, ೮. ೫೪ ವ)

ನಖಮಯೂಖ

[ನಾ] ಉಗುರಿನ ಕಾಂತಿ (ಪುಟ್ಟಿದಂ ಅಖಿಳ ಕ್ಷ್ಮಾಪಾಲಮೌಳಿ ಮಣಿರಂಜಿತ ಕಿರಣಾಪಾಳಿತ ನಖಮಯೂಖರಂಜಿತ ಚರಣಂ: ಪಂಪಭಾ, ೧. ೧೮)

ನಖಮಾಂಸ ಪ್ರೀತಿ

[ನಾ] ಉಗುರು ಮಾಂಸಗಳ ನಡುವಿರುವಂತಹ ಎಂದರೆ ಅನ್ಯೋನ್ಯ ಪ್ರೀತಿ (ಆತನೊಡವೋಯ್ತು ಪಗೆ ನಿಮಗೆ ಆತನಿಂ ಅಗ್ಗಳದ ಮಗನೆನಾಂ ನಖಮಾಂಸಪ್ರೀತಿಯೊಳೆ ನೆಗೆೞ್ವೆಂ: ಪಂಪಭಾ, ೧೪. ೭)

ನಖರ

[ನಾ] ಉಗುರು (ಮೃಗರಾಜನಖರ ಬಾಣಾವಳಿಗಳಿಂ ತೆಗೆನೆಱೆದು ಶಲ್ಯಂ ಉಱದೆ ಇಸೆ ಬಿದುವಂ ಮೃಗರಾಜಂಗಳೆ ಪೋೞ್ವವೊಲ್: ಪಂಪಭಾ, ೧೦. ೧೦೯)

ನಗ

[ನಾ] ಪರ್ವತ, ಬೆಟ್ಟ (ಪ್ರೀತಿವರ್ಧನಂ ರಿಪುನೃಪರಂ ಚಲದಲೆದು ಬಂದು ಚಾತುರ್ಬಲಯುತಂ ಆ ನಗದೆ ಬಳಸಿ ಬೀಡಂ ಬಿಟ್ಟಂ: ಆದಿಪು, ೫. ೫)

ನಗಕೂಟಾರೋಹಣ

[ನಾ] ಬೆಟ್ಟದ ಶಿಖರವನ್ನೇರುವುದು (ವಿಪಿನೋಲ್ಲಂಘನ ಸಿಂಧುಯಾನ ನಗಕೂಟಾರೋಹಣ ಕ್ಲೇಶಮಂತ್ರಪದಧ್ಯಾನ ಬಿಳಪ್ರವೇಶ ರಸವಾದ ಆಯಾಸದೊಳ್: ಆದಿಪು, ೧೬. ೭)

ನಗತಟ

[ನಾ] ಬೆಟ್ಟದ ತಪ್ಪಲು (ಸಿದ್ಧದಂಪತಿಗಳ್ ಕ್ರೀಡಿಸುತಿರ್ಪರೀ ನಗತಟಶ್ರೀಖಂಡಷಂಡಂಗಳೊಳ್: ಆದಿಪು, ೯. ೧೧೮)

ನಗರ

[ನಾ] ಪಟ್ಟಣ (ಅನುಕ್ರಮದಿಂ ಗ್ರಾಮ ನಗರ ಖೇಡ ಖರ್ವಡ ಮಡಂಬಂಗಳೊಳ್ ಎಡಂಬಡಿಲ್ಲದೆ ಚರ್ಯಾಮಾರ್ಗದೊಳ್ ನಡೆವಲ್ಲಿ: ಆದಿಪು, ೯. ೧೨೪ ವ)

ನಗಿಸು

[ಕ್ರಿ] ನಗುವಂತೆ ಮಾಡು (ಕಾರುಣ್ಯನಿನಾದಂ ನಿನ್ನಾದಂ ನಗಿಸುಗುಂ: ಆದಿಪು, ೩. ೬)

ನಗು

[ಕ್ರಿ] ಅಪಹಾಸ್ಯಮಾಡು (ಪಂದಲೆಯೊಳಾದ ಮುಗುಳ್ನಗೆ ಭೀತರಾದರೆಲ್ಲರುಮಂ ಅಳುರ್ಕೆಯಿಂ ನಗುವವೋಲ್: ಪಂಪಭಾ, ೧೩. ೫೮)

ನಗೇಂದ್ರ

[ನಾ] ಪರ್ವತಶ್ರೇಷ್ಠ, ಶ್ರೇಷ್ಠ ಪರ್ವತ (ಗುಹ್ಯಕನೆಂಬನಂ ಸ್ಮರಣಮಾತ್ರದೊಳ್ ಬರಿಸಿ ಸಾಹಸಾಭರಣನಂ ಇಂದ್ರಕೀಲ ನಗೇಂದ್ರಮಂ ಎಯ್ದಿಸಿ ಬರ್ಪುದೆಂದು ಪೇೞ್ವುದುಂ: ಪಂಪಭಾ, ೭. ೬೬ ವ)

ನಗೋಪತ್ಯಕ

[ನಾ] ಬೆಟ್ಟದ ತಪ್ಪಲು (ಓರಂತೊಱಗಿರ್ದ ಶಾಳಿವನದಿಂ ಸೇವ್ಯಂ ನಗೋಪತ್ಯಕಂ: ಆದಿಪು, ೧. ೬೪)

ನಚ್ಚಿನಚ್ಚು

[ನಾ] [ನಚ್ಚಿನ+ಅಚ್ಚು] ನಂಬಿಕೆ ಅಥವಾ ಆತ್ಮವಿಶ್ವಾಸದ ಮುದ್ರೆ (ನಚ್ಚಿನಚ್ಚು ಉಡಿವಿನಂ ಎಚ್ಚೊಡೆ ಎಚ್ಚೆಡೆಯಿಂ ಎಚ್ಚ ಅರುಣಾಂಬು ಕಲಂಕಿ ಪಾಯೆ: ಪಂಪಭಾ, ೧೧. ೧೪೨)
< previous1234567893738Next >

Search Dictionaries

Loading Results

Follow Us :   
  Download Bharatavani App
  Bharatavani Windows App