भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456Next >

ಎತ್ತೆತ್ತ

[ಅ] ಏನೇನು (ಮನದೊಳ್ ಮುಂ ಪುದಿದಿರ್ದ ಕೋಪಮನಿತುಂ ತೂಳ್ದಾಗಳ್ ಎತ್ತೆತ್ತ ಗೆಯ್ದೆನಿದಂ ತಮ್ಮನೊಳ್ ಎಂಬುದೊಂದುಪಶಮಂ ಕೈಗಣ್ಮಿ: ಆದಿಪು, ೧೪. ೧೩೨)

ಎನತು

[ಗು] ನನ್ನದು (ನೀನೀಯೆ ಬಂದುದೆನಗೆ ಇದಂ ಎನತು ಎಂದು ಏಂ ನಿನಗೆ ಬಗೆಯಲಪ್ಪುದೆ: ಆದಿಪು, ೧೪. ೧೪೪)

ಎನಿತಾನುಂ

[ನಾ] ಎಷ್ಟೆಷ್ಟೋ, ಹಲವು ಬಗೆಗಳಲ್ಲಿ (ಎಂದು ಎನಿತಾನುಂ ತೆಱದೊಳ್ ಅಳಿಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳಂ ನುಡಿದುಂ ಕಾಲ್ವಿಡಿದುಂ ಅಚಳಿತಧೈರ್ಯನ ಮನಮಂ ಚಲಿಯಿಸಲಾಱದೆ: ಪಂಪಭಾ, ೭. ೯೪ ವ)

ಎನಿತು

[ನಾ] ಎಷ್ಟು (ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆ ಎನಿತು ಬೆಳಗಿಯುಂ ಕೞ್ತಲೆಯಂ ಅಲೆಯಲಾಱವಾದುವು: ಪಂಪಭಾ, ೪. ೪೯ ವ)

ಎನಿಬರಾನುಂ

[ನಾ] ಎಷ್ಟೋ ಜನ (ನಂಟರಪ್ಪ ಅಶ್ವಗ್ರೀವ ವಿದ್ಯುನ್ಮಾಲಿ ನೀಲಾದಿಗಳಪ್ಪ ಪ್ರಭೃತಿಗಳ್ ಎನಿಬರಾನುಂ ಮುರಾಂತಕನಂ ಬಂದು ತಾಗಿದೊಡೆ: ಪಂಪಭಾ, ೬. ೬೪ ವ)

ಎನಿಸು

[ಕ್ರಿ] ಎನ್ನುವಂತೆ ಮಾಡು, ಅನ್ನಿಸು (ನೆಗೞ್ದಾದಿ ಕ್ಷತ್ರಿಯರೊಳಂ ಇಲ್ಲೆನಿಸಿದುದೀ ತ್ರಿಜಗದೊಳ್ ಎಸಗಿದ ಎಸಕಂ ಅರಿಕೇಸರಿಯಾ: ಪಂಪಭಾ, ೧. ೨೧)

ಎನು

[ಕ್ರಿ] ಳು (ಎಂದು ತನ್ನ ಮನಮನಱಿದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮಂ ಎನಲಱಿಯದೆ: ಪಂಪಭಾ, ೪. ೬೪ ವ)

ಎನೆ

ಎನ್ನಿಸುವಂತೆ, ಎಂದು ತೋರುವಂತೆ (ಪುಸಿ ಎನೆ ರಥಮಂ ಹರಿ ಚೋದಿಸುವಂತೆವೊಲಿರ್ದು ಅದೆಂತು ನರನಂ ಗೆಲಿಪಂ ವಿಸಸನದೊಳ್: ಪಂಪಭಾ, ೧೨. ೯೧)

ಎನೆಯೆನೆ

[ಕ್ರಿ] [ಎನೆ+ಎನೆ] ಎಂದು ಹೇಳಲು (ಎನೆಯೆನೆ ಬಾಷ್ಪವಾರಿ ಪುಳಕಂಬೆರಸು ಒರ್ಮೆಯೆ ಪೊಣ್ಮೆ ಮುನ್ನೆ ನೀವೆನಗಿದನೇಕೆ ಪೇೞ್ದಿರೊ: ಪಂಪಭಾ, ೯. ೬೮)

ಎನ್ನ

[ಕ್ರಿ] ಎನ್ನುವೆಯಾ? (ಅರರೀಪುಟಮೆರಡುಂ ಜೀರ್ಗರೆದು ಮರಲ್ದಂದಮೆಂತುಟಾಯ್ತು ಎನ್ನ ಭಯಂಕರ ದಂಡರತ್ನಹತಿಯಿಂ ಗಿರಿ ನೊಂದು ನರಳ್ವ ಮಾೞ್ಕೆಯಂತಾಯ್ತಾಗಳ್: ಆದಿಪು, ೧೩. ೩೭); [ಗು] ನನ್ನ (ಅಸದಾಗ್ರಹಮಂ ಬಿಸುಡುವುದೊರ್ಮೆಗೆ ಮಱೆವುದು ಎನ್ನ ದುರ್ವಿಳಸನಮಂ: ಆದಿಪು, ೧೪. ೧೩೧)

ಎನ್ನ ಗೆಯ್ದ

[ಗು] ನಾನು ಮಾಡಿದ (ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು: ಪಂಪಭಾ, ೧. ೧೧೨ ವ)

ಎನ್ನರುಂ

[ಗು] ಎಂತಹವರೂ (ಎನ್ನರುಂ ತೀವಿ ತಳ್ತಿವಳೀ ಕುಚಂಗಳಂ ಅೞ್ಕಱಿಂದ ಅಮರ್ದಪ್ಪಿ ಪೋಗು ಆವ ಉಪಾಯದೊಳಾದೊಡಂ ನೆರೆದಲ್ಲದಿನ್ನಿರೆನೀಕೆಯೊಳ್: ಪಂಪಭಾ, ೮. ೬೩); [ಗು] ಯಾರೂ (ನಿನ್ನ ಉತ್ಪತ್ತಿಯಂ ಇಂತೆಂದು ಎನ್ನರುಂ ಅಣಂ ಅಱಿಯರ್ ಅಱಿವೆನಾಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನಂಬಿಕೆ ಕೊಂತಿ ಇಂತಿವರ್ ನೆಱೆ ಬಲ್ಲರ್: ಪಂಪಭಾ, ೯. ೬೬)

ಎನ್ನರೊಳಂ

[ಗು] ಎಂಥವರಲ್ಲೂ (ಸವಿಯೊಳ್ ನಿನ್ನಂ ಮೆಚ್ಚಿಪೆಂ ಎಡಱಿದೊಡೆ ಎನ್ನರೊಳಂ ಮಲ್ಲಂ ಒರ್ವ ವಲ್ಲಲನೆಂಬೊಂ: ಪಂಪಭಾ, ೮. ೫೪)

ಎನ್ನರ್

[ನಾ] ನನ್ನವರು (ಅಱಿದೆಂ ಸೋದರರೆಂದು ಪಾಂಡವರಂ ಇನ್ನೆಂತು ಎನ್ನರಂ ಕೊಲ್ವೆಂ: ಪಂಪಭಾ, ೯. ೭೧)

ಎನ್ನಿರ್ಪ

[ಗು] ನಾನಿರುವ (ನಿನ್ನೆಂದಂತುಟೆ ಮೋಕ್ಷಕ್ಕೆ ಎನ್ನಿರ್ಪಿರವು ಅಘಟಮಾನವೈಹಿಕದ ತೊಡರ್ಪು ಎನ್ನಿರವಿನೊಳುಂಟು: ಪಂಪಭಾ. ೮. ೪)

ಎನ್ನೆಗಂ

[ಅ] ಯಾವಾಗಲೂ (ಎಯ್ದುದಱೊಳ್ ಅಳವಡದುದುಂ ಎಯ್ದುದುದನೆ ಬಯಸುತಿರ್ಪುದುಂ ಜೀವಕ್ಕೇಗೆಯ್ದುಂ ಇದು ಸಹಜಂ ಅನ್ನೆಗಂ ಎಯ್ದುಗುಂ ಎನ್ನೆಗಂ ಉದಾತ್ತ ಮುಕ್ತಿಶ್ರೀಯಂ: ಆದಿಪು, ೯. ೫೨)

ಎಂಬ ಮಾಹಿತಿಯನ್ನು ಡಿಎಲ್‌ಎನ್ ಕೊಡುತ್ತಾರೆ

ದೀಪಿಕೆ: ಪು. ೪೯೦]

ಎಮೆ

[ನಾ] ಎವೆ, ಕಣ್ಣುರೆಪ್ಪೆ (ಮದನ ದವಾನಲಾರ್ಚಿ ತನುವಂ ಸುಡೆ ತಳ್ತ ಎಮೆಯೊಳ್ ಪಳಂಚಿ ಬೀಗಿದ ಬೆಳರ್ವಾಯೊಳ್ ಉಚ್ಚಳಿಸಿ .. .. ಎಯ್ದಿದುವು ನೇತ್ರಜಲಬಿಂದುಗಳ್ ಆಕೆಯ ನಿಮ್ನನಾಭಿಯಂ: ಪಂಪಭಾ, ೫. ೯)

ಎಮೆಯಿಕ್ಕು

[ನಾ] ರೆಪ್ಪೆ ಬಡಿ, ಕಣ್ಣು ಮಿಟುಕಿಸು (ಸೋಲದೊಲೆಯ್ದೆ ಪೀರ್ದ ತೆಱದಿಂದೆಮೆಯಿಕ್ಕದೆ ನೋೞ್ಪ ಕಣ್ ಪೀಲಿವೊಲಾಗೆ: ಪಂಪಭಾ, ೪. ೪೩)

ಎಮ್ಮಂದಿಗ

[ನಾ] ನಮ್ಮಂಥವನು (ಎಮ್ಮಂದಿಗರ್ ಪ್ರಣಾಮದೊಳೆ ಪುಣ್ಯಮಂ ಪಡೆವರ್: ಆದಿಪು, ೧೩. ೯೦)
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App