Kumbarike Vrutti Padakosha (Tulu-Kannada)(KASAPA)
Kannada Sahitya Parishattu (KASAPA)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
ಅಗೋಳಿ
(ನಾ)
ಅನ್ನ ಬೇಯಿಸಲು ಉಪಯೋಗಿಸುತ್ತಿದ್ದ ದೊಡ್ಡ ಪಾತ್ರೆ, ವೃತ್ತಾಕಾರದ ಬಾಯಿಯುಳ್ಳ ದುಂಡಗಿನ ಪಾತ್ರೆ, ಇದರಲ್ಲಿ ದೊಡ್ಡ ಮತ್ತು ಸಣ್ಣ ಗಾತ್ರದ ಪಾತ್ರೆಗಳಿರುತ್ತವೆ.
ಅಡ್ಯರ
(ನಾ)
ಗಂಜಿಯಿಂದ ಗಂಜಿನೀರನ್ನು (ತಿಳಿ) ಬೇರ್ಪಡಿಸಿ ಅನ್ನ ಮಾಡಲು ಉಪಯೋಗಿಸುವ ಪಾತ್ರೆ. ಗಾತ್ರದಲ್ಲಿ ಚಿಕ್ಕದು. ಅಡಿ ಇರುವ ಮಣ್ಣಿನ ಪಾತ್ರೆ.
ಅರ್-ಮಣ್ಣು
(ನಾ)
ಕಂಚಿನ ಎರಕಕ್ಕೆ ಅಚ್ಚು ತಯಾರಿಸಲು ಗುಂಡುಕಲ್ಲಿನಿಂದ ಅರೆದು ಪಾಕ ಭರಿಸಿದ ಮಣ್ಣು.
ಅರಿಯ
(ನಾ)
ಮಣ್ಣಿನಿಂದ ತಯಾರಿಸಿದ ಚಿಕ್ಕ ಪಾತ್ರೆ, ಕುಡಿಕೆ A small earthen vessel
ಅಲೆ
(ಕ್ರಿ)
ಗುಂಡುಕಲ್ಲಿನಿಂದ ಮಡಕೆಯನ್ನು ತಿಕ್ಕಿ ನಯಗೊಳಿಸುವುದು.
ಆವೆ
(ನಾ)
ಆವಿಗೆ, ಕುಂಬಾರನ ಒಲೆ, ಕುಲುಮೆ A potters kiln ಆವಿಗೆಯಲ್ಲಿ ಬೇಯಬೇಕು ಮಡಕೆ.
ಕೋವೆಯಲ್ಲ ಕರಗಬೇಕು ಬೆಳ್ಳಿ ಬಂಗಾರ (ಗಾದೆ)
ಆವೆತ ಕಮಾನ್
(ವಿಶೇ)
ಆವಿಗೆಯ ಕಮಾನು
ಆವೆತ ಕಂಡಿ
(ನಾ)
ಆವಿಗೆಯ ಕಿಂಡಿ
ಆವೆತ ಗುರಿ
(ನಾ)
ಮಡಕೆ ಸುಡುವ ಹೊಂಡ
ಓಡ್
(ನಾ)
ಓಡು, ಹಂಚು ಮಡಕೆಯ ಚೂರು.
ಓಡಾರಿ
(ನಾ)
ಕುಂಬಾರ, ಮೂಲ್ಯ
ಓಡಾರ್ತಿ
(ನಾ)
ಕುಂಬಾರ ಹೆಂಗಸು.
ಒಳವು
(ನಾ)
ಲಳಿಗೆ, ಚಕ್ರಕ್ಕೆ ಮಣ್ಣು ಹಾಕಿ ಮೇಲಕ್ಕೆ ಗೋಪುರದಂತೆ ಎತ್ತುವರು ಇದು ಟೊಳ್ಳಾಗಿರುತ್ತದೆ.
ಕರ
(ನಾ)
ಅನ್ನ ಬೇಯಿಸುವ ಪಾತ್ರೆ, ಇದು ಅಗೋಳಿಗಿಂತ ಚಿಕ್ಕದು. ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳನಲ್ಲಿ ಈ ಪಾತ್ರೆಯನ್ನು ಹೆಚ್ಚಾಗಿ ಬಳಸುತ್ತಿದ್ದರು.
ಕಡ್ಯ
(ನಾ)
ಕಂದೆಲ್, ಕೊಡ ಬಿಂದಿಗೆ, ಚಿಕ್ಕ ಬಾಯಿಯ ಈ ದುಂಡಗಿನ ಪಾತ್ರೆಯನ್ನು ತೆಂಗಿನಗಿಡಕ್ಕೆ ನೀರು ಹಾಕಲು ಬಳಸುತ್ತಿದ್ದರು.
ಕದಿಗೆ ಕದಿಕ್ಕೆ
(ನಾ)
ದೇವರಿಗೆ ಹರಕೆ ಹಾಕಲಿಕ್ಕಾಗಿ ಇಟ್ಟ ಒಂದು ಬಗೆಯ ಪಾತ್ರೆ, ಮಡಕೆ ಕಾಣಿಕೆ ಡಬ್ಬ ಗಡಗಿ.
ಕನ್ನಟಿ ಓಡ್
(ನಾ)
ಕನ್ನಡಿ ಹೆಂಚು, ಬೆಳಕಿನ ಹೆಂಚು, A kind of tile having glass in the middle for the proper illumination of the house.
ಕನ್ನೆಗಡ್ಡೆ
(ನಾ)
ಕುಂಬಾರಿಕೆಯ ಮಣ್ಣು
ಕಪ್ಟರ್
(ನಾ)
ಮಡಕೆತುಂಡು, ಕಾವಲಿಯಾಗಿ ಉಪಯೋಗಿಸುವ ಒಡೆದ ಮಡಕೆಯ ಭಾಗ
ಕಪ್ಪರ್ ರೊಟಿ